¡Sorpréndeme!

6 ವರ್ಷದ 'ಮೆಗಾ ಧಾರಾವಾಹಿ' ಅಂತ್ಯ | Filmibeat Kannada

2017-11-23 34 Dailymotion

ಟಿವಿ ಪ್ರೇಕ್ಷಕರಿಗೊಂದು ಬೇಸರದ ಸಂಗತಿ. ಅದರಲ್ಲೂ ಸ್ಟಾರ್ ಸುವರ್ಣ ವೀಕ್ಷಕರಿಗೆ ಇದು ನಿರಾಸೆ ಮೂಡಿಸಬಹುದು. ಸುಮಾರು 6 ವರ್ಷದಿಂದ ಕಿರುತೆರೆ ಪ್ರೇಕ್ಷಕರನ್ನ ರಂಜಿಸುತ್ತಾ ಬಂದಿದ್ದ ಮೆಗಾ ಧಾರಾವಾಹಿಯೊಂದು ಅಂತ್ಯವಾಗುತ್ತಿದೆ.ಇಂದಿನ ಸೀರಿಯಲ್ ಗಳ ಸ್ಪರ್ಧೆಯಲ್ಲಿ ಕೆಲವು ಧಾರಾವಾಹಿಗಳು ಜನರ ಮನ್ನಣೆ ಸಿಗದೆ ಕೆಲವೇ ಎಪಿಸೋಡ್ ಗಳ ನಂತರ ನಿಂತು ಹೋಗುತ್ತೆ. ಇನ್ನು ಕೆಲವೂ ಧಾರಾವಾಹಿಗಳು ಪ್ರೇಕ್ಷಕರನ್ನ ರಂಜಿಸುವಲ್ಲಿ ಯಶಸ್ವಿಯಾದರೇ, ವರ್ಷಾನುಗಟ್ಟಲೇ ಪ್ರಸಾರವಾಗುತ್ತೆ. ಹೀಗೆ, ವರ್ಷಗಳ ಕಾಲ ಸೂಪರ್ ಸಕ್ಸಸ್ ಕಂಡಿದ್ದ 'ಅಮೃತವರ್ಷಿಣೆ' ಈಗ ತನ್ನ ಕೊನೆಯ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ.ಹಾಗಿದ್ರೆ, 'ಅಮೃತ ವರ್ಷಣಿ'ಯ ಕೊನೆಯ ಶೋ ಯಾವಾಗ? ಎಂಬ ಮಾಹಿತಿ ತಿಳಿಯಲು ಮುಂದೆ ಓದಿ.'ಅಮೃತವರ್ಷಣಿ' ಧಾರಾವಾಹಿ ತನ್ನ ಕೊನೆಯ ಪ್ರದರ್ಶನಕ್ಕೆ ಸಜ್ಜಾಗಿದ್ದು, ನವೆಂಬರ್ 24 ರಂದು ಕೊನೆಯ ಕಂತು ಪ್ರಸಾರವಾಗಲಿದೆ. ನಂತರ ನವೆಂಬರ್ 27 ರಿಂದ ಡಿಸೆಂಬರ್ 1 ರ ವರೆಗು ರಾತ್ರಿ 9.30ಕ್ಕೆ ಈ ವಿಶೇಷ ಸಂಚಿಕೆಗಳ ರಸದೌತಣ ನೀಡಲಿದೆ ಸ್ಟಾರ್ ಸುವರ್ಣ ವಾಹಿನಿ.ಇಲ್ಲಿಯವರೆಗೂ ಸುಮಾರು 1700ಕ್ಕೂ ಅಧಿಕ ಕಂತುಗಳು 'ಅಮೃತವರ್ಷಿಣಿ' ಧಾರಾವಾಹಿ ಪ್ರಸಾರವಾಗಿತ್ತು. ಅತಿ ಹೆಚ್ಚು ವರ್ಷಗಳು ಪ್ರಸಾರವಾದ ಸೀರಿಯಲ್ ಗಳ ಪೈಕಿ ಅಮೃತವರ್ಷಿಣಿಯೂ ಒಂದಾಗಿದೆ.